ನಮಸ್ಕಾರ ಸ್ನೇಹಿತರೆ,
ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯ ಬಗ್ಗೆ ನಿಮಗೆಲ್ಲರಿಗೂ ತಿಳಿದಿರುವಂತೆ, ಈ ಯೋಜನೆಯು ಬಡ ಕುಟುಂಬಗಳಿಗೆ ಅನ್ನದ ಭಾಗ್ಯವನ್ನು ನೀಡುವ ಉದ್ದೇಶದಿಂದ ಬಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿ ಅಥವಾ 5 ಕೆಜಿ ಅಕ್ಕಿ ಹಾಗೂ ಇನ್ನೂ 5 ಕೆಜಿ ಬದಲಾಗಿ 1 ಕೆಜಿ ಗೆ 34 ರೂಪಾಯಿ ಹಣವನ್ನು ನೀಡಲಾಗುತ್ತಿದೆ.
ಅನ್ನಭಾಗ್ಯ ಯೋಜನೆ ಲಿಂಕ್
ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ. ಅದುಕ್ಕೆ ಕೆಳಗಿನ ಅನ್ನಭಾಗ್ಯ ಯೋಜನೆ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅನ್ನಭಾಗ್ಯ ಯೋಜನೆ ಸ್ಟೇಟಸ್ ಚೆಕ್ ಮಾಡುವ ವಿಧಾನ
- ಇಲ್ಲಿ ನಿಮಗೆ "ಇ-ಸೇವೆಗಳು" ಅಥವಾ "E-services" ಎಂಬ ಆಯ್ಕೆ ಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- ನಂತರ, "DBT ಸ್ಥಿತಿ" ಅಥವಾ "DBT status" ಎಂಬ ಆಯ್ಕೆಯನ್ನು ಆರಿಸಿ.
- ಇಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯನ್ನು ನಮೂದಿಸಿ.
- ಆಮೇಲೆ "Submit" ಬಟನ್ ಕ್ಲಿಕ್ ಮಾಡಿ.
- ಕೆಲವೇ ಕ್ಷಣಗಳಲ್ಲಿ ನಿಮ್ಮ annabhagya yojane Status ನಿಮ್ಮ ಮುಂದೆ ಬರುತ್ತೆ..
ಗಮನಿಸಿ:
- ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಿಮಗೆ ತಿಳಿದಿರುವುದು ತುಂಬಾ ಮುಖ್ಯ.
- ನೀವು ಆನ್ಲೈನ್ನಲ್ಲಿ ಪರಿಶೀಲಿಸುವಾಗ ಇಂಟರ್ನೆಟ್ ಸಂಪರ್ಕ ಸರಿಯಾಗಿ ಇರಬೇಕು.
- ಯಾವುದೇ ಸಮಸ್ಯೆ ಎದುರಾದರೆ ನೀವು ಹತ್ತಿರದ ಸರ್ಕಾರಿ ಕಚೇರಿಗೆ ಭೇಟಿ ನೀಡಿ ಸಹಾಯ ಪಡೆಯಬಹುದು.
Annabhagya ಯೋಜನೆಯ ಪ್ರಯೋಜನಗಳು.
ಅನ್ನದ ಭದ್ರತೆ: ಬಡ ಕುಟುಂಬಗಳಿಗೆ ತಿಂಗಳಿಗೊಮ್ಮೆ ಉಚಿತ ಅಕ್ಕಿ.
ಸುಲಭ ಲಭ್ಯತೆ: ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸ್ಥಿತಿ ಪರಿಶೀಲನೆ.
ಸಮಯದ ಉಳಿತಾಯ: ಇತರ ಸರ್ಕಾರಿ ಕಚೇರಿಗಳಿಗೆ ತೆರಳದೆಯೇ ಮಾಹಿತಿ ಲಭ್ಯ.
ಸ್ಟೇಟಸ್ ಪರಿಶೀಲನೆಗೆ ಅಗತ್ಯ ದಾಖಲೆಗಳು
Ration Card Number
ಆಧಾರ್ ಸಂಖ್ಯೆ (optional)
ನೋಂದಾಯಿತ ಮೊಬೈಲ್ ಸಂಖ್ಯೆ (optional)
ಸಾಮಾನ್ಯ ತೊಂದರೆಗಳು ಮತ್ತು ಪರಿಹಾರಗಳು.
"No Record Found" ಎರರ್: ಕಾರ್ಡ್ ಸಂಖ್ಯೆ ಅಥವಾ ವಿವರಗಳಲ್ಲಿ ತಪ್ಪು ಇರಬಹುದು. ಸರಿಯಾಗಿ ಪುನಃ ನಮೂದಿಸಿ.
ಅರ್ಜಿ ಸ್ಥಿತಿಯ ಮಾಹಿತಿ ಲಭ್ಯವಿಲ್ಲ: ಅದು ಪ್ರಸ್ತುತ ಪ್ರಕ್ರಿಯೆಯಲ್ಲಿರಬಹುದು. ಕೆಲವು ದಿನಗಳ ನಂತರ ಪರಿಶೀಲಿಸಿ.
ಅನ್ನಭಾಗ್ಯ ಯೋಜನೆ ಸಹಾಯಕ್ಕಾಗಿ ಸಂಪರ್ಕಿಸಿ:
👉 ಸಂಪರ್ಕ ಮಾಹಿತಿ:
Helpline: 1967 ಅಥವಾ 1800-425-9339
Conclusion
ಅನ್ನಭಾಗ್ಯ ಯೋಜನೆ Karnataka ರಾಜ್ಯದ ಸಾವಿರಾರು ಕುಟುಂಬಗಳಿಗೆ ಆರ್ಥಿಕ ನೆಮ್ಮದಿ ಮತ್ತು ಆಹಾರದ ಭದ್ರತೆಯನ್ನು ಒದಗಿಸುತ್ತದೆ. ಆನ್ಲೈನ್ ಸ್ಟೇಟಸ್ ಚೆಕಿಂಗ್ ಮೂಲಕ, ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಯಾವುದೇ ಸಮಯದಲ್ಲಿ ತಪಾಸಿಸಬಹುದು. ಮೇಲೆ ನೀಡಿರುವ ಅನ್ನಭಾಗ್ಯ ಯೋಜನೆ ಲಿಂಕ್ ಅನ್ನು ಅನುಸರಿಸಿ, ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ, ಮತ್ತು ಯೋಜನೆಯ ಸಕಾಲದ ಸೌಲಭ್ಯಗಳನ್ನು ಪಡೆದುಕೊಳ್ಳಿ.
FAQs about ಅನ್ನಭಾಗ್ಯ ಯೋಜನೆ
ನಾನು ಅನ್ನಭಾಗ್ಯ ಯೋಜನೆಯನ್ನು ಆನ್‌ಲೈನ್‌ನಲ್ಲಿ ಹೇಗೆ ಚೆಕ್ ಮಾಡಬಹುದು?
ಕೆಳಗಿನ ಅನ್ನಭಾಗ್ಯ ಯೋಜನೆ ಲಿಂಕ್ ಅನ್ನು ಕ್ಲಿಕ್ ಮಾಡಿ ಚೆಕ್ ಮಾಡಬಹುದು [ahara.kar.nic.in](https://ahara.kar.nic.in/lpg/)
ಅನ್ನಭಾಗ್ಯ ಯೋಜನೆ ಸ್ಟೇಟಸ್ ಚೆಕ್ ಮಾಡೋಕೆ ಅಗತ್ಯವಿರುವ ವಿವರಗಳು.
ನಿಮ್ಮ Ration card number, ಆಧಾರ್ ಸಂಖ್ಯೆ, ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ.
ಸ್ಟೇಟಸ್ ಪರಿಶೀಲನೆ ಸಮಯದಲ್ಲಿ "No Record Found" ಎರರ್ ಬರುತ್ತದೆ, ಏನು ಮಾಡಬೇಕು?
ಅದನ್ನು ಸರಿಪಡಿಸಲು ನಿಮ್ಮ ನಮೂದಿತ ವಿವರಗಳು ಪರಿಶೀಲಿಸಿ. ಇನ್ನು ಸಹಾಯಕ್ಕಾಗಿ 1967 ಅಥವಾ 1800-425-9339 ಗೆ ಸಂಪರ್ಕಿಸಿ.